ಸುಪ್ತ- ಕಾದಂಬರಿ

Posted on: 12 Oct 2019

Category: Book Review

Blog Views: 1884

 

ಈ ಪುಸ್ತಕ ಓದಿ ನಾಲ್ಕು ದಿವಸಗಳಾದರೂ ಅದರದ್ದೇ ಗುಂಗಿನಲ್ಲಿದ್ದೇನೆ. ಒಂದೇ ಸಾಲಲ್ಲಿ ಇಷ್ಟು ಸಾಕಲ್ವಾ ವಿಮರ್ಶೆ?

ಇದು ಈಗಾಗಲೇ ಹೆಸರುವಾಸಿಯಾಗುತ್ತಿರುವ ಕೃತಿ. ಇದರಲ್ಲಿ ನನಗಿಷ್ಟವಾದ ಅಂಶಗಳು:

  • ಪಾತ್ರಗಳ ಅತ್ಯುತ್ತಮ ಪೋಷಣೆ! ಕೇವಲ ನಾಲ್ಕೋ-ಐದೋ ಪಾತ್ರಗಳನ್ನು ಹಿಡಿದುಕೊಂಡು ಲೇಖಕರು ಒಂದು ನಿರೀಕ್ಷಿತ ಕತೆಯನ್ನೇ ಎಲ್ಲೂ ಬೇಸರ ತರದ ಹಾಗೆ ಬರೆದಿದ್ದಾರೆ. ಅದರಲ್ಲೂ ಮುಕ್ಕಾಲು ಭಾಗ ಅವಿನಾಶ್ –ಗಿರೀಶ್ ರ ಇರಿಸು-ಮುರಿಸು ಗೆಳೆತನ ಸೊಗಸಾಗಿ ಮೂಡಿ ಬಂದಿದೆ.
  • ಕ್ಯಾನ್ಸರ್ ಎಂಬ ಮಾರಕ ರೋಗ ಪ್ರತಿಯೊಬ್ಬರ ಬಂಧು-ಮಿತ್ರ ವಲಯದಲ್ಲಿ ಸಾಮಾನ್ಯವಾಗಿರುತ್ತದೆ, ಕ್ಯಾನ್ಸರ್ ರೋಗದ ಬಳಲುವಿಕೆ, ಅದರಿಂದ ಹೇಗೆ ಕೆಲವರ ಜೀವನ ಬದಲಾಗುತ್ತದೆ, ಚಿಕಿತ್ಸೆಯ ವಿವರಗಳು ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿದ್ದಾರೆ.
  • ತುಮಕೂರಿನ ಚಿತ್ರಣ, ದೇವರಾಯ ದುರ್ಗದ ದೃಶ್ಯಗಳು ಕಣ್ಣ ಮುಂದೆ ಕಟ್ಟುವಷ್ಟು ಚೆನ್ನಾಗಿದೆ.
  • ಅನಿರೀಕ್ಷಿತ ತಿರುವುಗಳು, ಉಪ ಕಥಾವಸ್ತುಗಳಿಲ್ಲದೇ ಇದ್ದರೂ ಓದುಗನನ್ನು ಹಿಡಿತದಲ್ಲಿರಿಸುತ್ತದೆ.

ಉತ್ತಮಗೊಳಿಸಬಹುದಾದ ಕೆಲವೇ ಕೆಲವು ಅಂಶಗಳೆಂದರೆ ಕರಡು ತಿದ್ದುವಿಕೆ ಮತ್ತು ಆಂಗ್ಲ ಭಾಷೆಯ ಪದಗಳ ಅತಿಯಾದ ಬಳಕೆ. ಆದರೆ ನಾವೇ “ಇವಿನಿಂಗ್ ವಾಕಿಂಗ್ ಹೋದಾಗ ಅಂಬ್ರೆಲಾ ತಗೊಂಡು ಹೋಗು,” ಎಂದು ಮಾತಾನಾಡುವ ದಿನಗಳಿವು, ಲೇಖಕರ ತಪ್ಪೇನಿಲ್ಲ.

ಸ್ವಲ್ಪ ಮಟ್ಟಿಗೆ 70ರ ದಶಕದ “ಆನಂದ್” ಚಲನಚಿತ್ರ ನೆನಪಿಗೆ ಬರುತ್ತದೆ, ಆದರೆ ಪುಸ್ತಕ ಭಿನ್ನವಾಗಿದೆ.

 

Tags: ಸುಪ್ತ, Book Review